Untitled Document
Sign Up | Login    
Dynamic website and Portals
  

Related News

ರಾಜೀನಾಮೆ ನೀಡಲು ಮುಂದಾದ 200ಕ್ಕೂ ಹೆಚ್ಚು ಮಹಾರಾಷ್ಟ್ರ ಆಪ್ ಸದಸ್ಯರು!

ಆಂತರಿಕ ಕಲಹದಿಂದ ಕಳೆಗುಂದಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ಮಹಾರಾಷ್ಟ್ರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಬಿಸಿ ತಟ್ಟಿದೆ. ಮಹಾರಾಷ್ಟ್ರ ಆಪ್ ನ ಸ್ಥಾಪಕ ಸದಸ್ಯ, ಮಾರುತಿ ಭಾಪ್ಕರ್, ಹೆಡ್ ಲೈನ್ಸ್ ಟು ಡೆಗೆ ಹೇಳಿಕೆ ನೀಡಿದ್ದು,...

ಆಪ್‌ ನಿಂದ ಪ್ರಶಾಂತ್ ಭೂಷಣ್‌, ಯೋಗೇಂದ್ರ ಯಾದವ್ ಉಚ್ಛಾಟನೆ

ಕಳೆದ ಕೆಲ ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಬಂಡೆದಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಸೇರಿದಂತೆ ನಾಲ್ವರು ನಾಯಕರನ್ನು ಆಮ್‌ ಆದ್ಮಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇದರಿಂದ ಆಪ್‌ ನಲ್ಲಿ ಎದ್ದಿದ್ದ ಆಂತರಿಕ ಕಲಹ ತಾರಕಕ್ಕೇರಿದೆ. ಈ ಹಿಂದೆ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ...

ಕೇಜ್ರಿವಾಲ್ ನ್ಯೂ ಹಿಟ್ಲರ್: ಭೂಷಣ್, ಯಾದವ್ ವಾಗ್ದಾಳಿ

ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ನಿಜ ಬಣ್ಣ ಗುರುತಿಸದೆ ನಾವು ದೊಡ್ಡ ತಪ್ಪು ಮಾಡಿದೆವು ಎಂದು ಎಎಪಿಯಿಂದ ಉಚ್ಚಾಟಿಸಲ್ಪಟ್ಟ ಸ್ಥಾಪಕ ಮುಖಂಡರಾದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಶಾಣ್ತ್...

ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಗೆ ಆಪ್ ನಿಂದ ಶೋಕಾಸ್ ನೋಟಿಸ್

ಭಿನ್ನಮತೀಯ ನಾಯಕರಾದ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆಮ್ ಆದ್ಮಿ ಪಕ್ಷ ಇಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಯಾದವ್, ಭೂಷಣ್, ಆನಂದ್ ಕುಮಾರ್ ಮತ್ತು ಅಜಿತ್ ಝಾ...

ಆಪ್‌ ಬಂಡಾಯ ನಾಯಕರಿಂದ ಸ್ವರಾಜ್ ಸಂವಾದ ಸಭೆ

ಆಮ್‌ ಆದ್ಮಿ ಪಕ್ಷದ ಪ್ರಮುಖ ಹುದ್ದೆಗಳಿಂದ ವಜಾಗೊಂಡಿರುವ ಬಂಡುಕೋರ ನಾಯಕರಾದ ಪ್ರಶಾಂತ್‌ ಭೂಷಣ್‌ ಹಾಗೂ ಯೋಗೇಂದ್ರ ಯಾದವ್‌ ಅವರು ಸ್ವರಾಜ್‌ ಸಂವಾದ' ಹೆಸರಲ್ಲಿ ಸಮಾನ ಮನಸ್ಕರ ಸಭೆ ಕರೆದಿದ್ದಾರೆ. ಇದರ ಬೆನ್ನಲ್ಲೇ, ಈ ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ...

ಆಪ್ ರಾಷ್ಟ್ರೀಯ ಕಾರ್ಯಕಾರಿಣಿಯ ಏಕೈಕ ಮಹಿಳಾ ಸದಸ್ಯೆ ರಾಜೀನಾಮೆ

'ಆಮ್ ಆದ್ಮಿ ಪಕ್ಷ'ದಲ್ಲಿ ಉಂಟಾಗಿರುವ ಆಂತರಿಕ ಭಿನ್ನಮತದಿಂದ ಬೇಸತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕ್ರಿಸ್ಟಿನಾ ಸ್ಯಾಮಿ ರಾಜೀನಾಮೆ ನೀಡಿದ್ದಾರೆ. ಕ್ರಿಸ್ಟಿನಾ ಸ್ಯಾಮಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಉಳಿದಿದ್ದ ಏಕೈಕ ಮಹಿಳಾ ಸದಸ್ಯೆಯಾಗಿದ್ದರು. ಕ್ರಿಸ್ಟಿನಾ ಸ್ಯಾಮಿ, ಯೋಗೇಂದ್ರ ಯಾದವ್ ಹಾಗೂ...

ಆಮ್ ಆದ್ಮಿ ಪಕ್ಷಕ್ಕೆ ಮೇಧಾ ಪಾಟ್ಕರ್ ರಾಜೀನಾಮೆ

ಆಮ್ ಆದ್ಮಿ ಪಕ್ಷದೊಳಗಿನ ರಾಜಕೀಯ ಜಂಗೀಕುಸ್ತಿ ಮುಂದುವರಿದಿರುವ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಾ.28ರಂದು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಯೋಗೇಂದ್ರ ಯಾದವ್ ಹಾಗೂ...

ಬಂಡಾಯ ನಾಯಕರ ವಿರುದ್ಧ ಆಪ್ ಕ್ರಮ

ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಹಿರಿಯ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ವಿರುದ್ಧ ಆಮ್ ಆದ್ಮಿ ಪಕ್ಷ ಕ್ರಮ ಕೈಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನಲೆಯಲ್ಲಿ ಇಬ್ಬರು ನಾಯಕರನ್ನು ಆಪ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವದಿಂದ ಉಚ್ಛಾಟನೆ...

ಪ್ರಶಾಂತ್ ಭೂಷಣ್ ಹಾಗೂ ಕೇಜ್ರಿವಾಲ್ ಬಣದ ಮಾತುಕತೆ ವಿಫಲ

ಆಮ್‌ ಆದ್ಮಿ ಪಕ್ಷದಲ್ಲಿನ ಬಂಡಾಯ ತಣಿಸಲು ಭಿನ್ನಮತೀಯ ನಾಯಕರಾದ ಪ್ರಶಾಂತ್ ಭೂಷಣ್‌, ಯೋಗೇಂದ್ರ ಯಾದವ್‌ ಬಣ ಮತ್ತು ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌ ಬಣದ ಮಧ್ಯೆ ನಡೆದ ಸಂಧಾನ ಮಾತುಕತೆಗಳು ಮುರಿದು ಬಿದ್ದಿವೆ. ಸಭೆಯ ಬಳಿಕ ಕೇಜ್ರಿವಾಲ್‌ ಗೆ ಪತ್ರ ಬರೆದಿರುವ ಯಾದವ್...

ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಯೋಗೇಂದ್ರ ಯಾದವ್, ಭೂಷಣ್ ಆರೋಪ

'ಆಮ್ ಆದ್ಮಿ ಪಕ್ಷ'ದ ಆಂತರಿಕ ಭಿನ್ನಮತ ಉಲ್ಭಣಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಮಾ.27ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್, ಅರವಿಂದ್ ಕೇಜ್ರಿವಾಲ್ ಅವರ...

ಆಮ್ ಆದ್ಮಿ ಪಕ್ಷಕ್ಕೆ ಪ್ರಶಾಂತ್ ಭೂಷಣ್ ರಾಜೀನಾಮೆ

ಆಮ್ ಆದ್ಮಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ನಾಯಕ ಪ್ರಶಾಂತ್ ಭೂಷಣ್ ಅವರು ಬುಧವಾರ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ. ಭಿನ್ನಾಭಿಪ್ರಾಯ ಶಮನಕ್ಕಾಗಿ ಮಾ.17ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ವಿರುದ್ಧವೇ ಬಂಡಾಯವೆದ್ದಿದ್ದ ಪ್ರಶಾಂತ್ ಭೂಷಣ್ ಹಾಗೂ ಯೇಗೇಂದ್ರ ಯಾದವ್...

ಯೋಗೇಂದ್ರ ಯಾದವ್ ಭೇಟಿ ಮಾಡಿದ ಆಪ್ ನಾಯಕರು

ಆಮ್ ಆದ್ಮಿ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಮುಂದಾಗಿರುವ ಅರವಿಂದ್ ಕೇಜ್ರಿವಾಲ್ ಬಣದ ಹಿರಿಯ ನಾಯಕರು ಯೋಗೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಇದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಗೆ ಹಿಂದಿರುಗಿದ ಕೆಲವೇ ಘಂಟೆಗಳಲ್ಲಿ ನಡೆದಿದೆ.ಎರಡು ಬಣಗಳು...

ಯೋಗೇಂದ್ರ ಯಾದವ್, ಭೂಷಣ್ ಉಚ್ಚಾಟನೆಗೆ ಆಪ್ ಶಾಸಕರ ಒತ್ತಾಯ

ಆಮ್ ಆದ್ಮಿ ಪಕ್ಷದ ಆಂತರಿಕ ಭಿನ್ನಮತ ಸದ್ಯಕ್ಕೆ ಇನ್ನಷ್ಟು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಎದುರಿಸುತ್ತಿರುವ ಯೋಗೇಂದ್ರ ಯಾದವ್, ಶಾಂತಿ ಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ದೆಹಲಿ ಆಪ್ ಶಾಸಕರು ಆಗ್ರಹಿಸಿದ್ದಾರೆ. ಇದೀಗ ಪಕ್ಷದ ಸೋಲು...

ಹೆಚ್ಚಿದ ಆಪ್ ಬಿಕ್ಕಟ್ಟು: ಪಕ್ಷಕ್ಕೆ ಅಂಜಲಿ ದಮಾನಿಯಾ ರಾಜೀನಾಮೆ

ಆಮ್‌ ಆದ್ಮಿ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸಧ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ, ಮಹಾರಾಷ್ಟ್ರದ ಹಿರಿಯ ಆಪ್ ನಾಯಕಿ ಅಂಜಲಿ ದಮಾನಿಯಾ ಆಪ್‌ ಗೆ ರಾಜೀನಾಮೆ ನೀಡಿದ್ದಾರೆ. ನಾನು ಈ ವರೆಗೂ ಅರವಿಂದ್ ಕೇಜ್ರಿವಾಲರನ್ನು ಬೆಂಬಲಿಸಿಕೊಂಡು ಬಂದಿರುವುದು ತತ್ವಗಳಿಗಾಗಿಯೇ ಹೊರತು ಕುದುರೆ ವ್ಯಾಪಾರಕ್ಕೆ ಅಲ್ಲ...

ಎ.ಎ.ಪಿ ಸೋಲಿಗೆ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ತಂತ್ರ ರೂಪಿಸಿದ್ದರು

'ಆಮ್ ಆದ್ಮಿ ಪಕ್ಷ'ದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ಮೂವರು ನಾಯಕರ ಜಾತಕ ಬಯಲಾಗಿದೆ. ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್ ಅವರು ಕೆಲಸ ಮಾಡಿದ್ದರು ಎಂದು ಎಎಪಿಯ...

ಯೋಗೇಂದ್ರ ಯಾದವ್; ಪ್ರಶಾಂತ್ ಭೂಷಣ್ ಬಂಡಾಯ ಶಮನ

ಅರವಿಂದ್ ಕೇಜ್ರಿವಾಲ್‌ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಕಾರಣಕ್ಕೆ ತಮ್ಮನ್ನು ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾಗೊಳಿಸ ಬಹುದು ಎಂಬ ವರದಿಗಳ ಬೆನ್ನಲ್ಲೇ ಹಿರಿಯ ಮುಖಂಡರಾದ ಯೋಗೇಂದ್ರ ಯಾದವ್‌ ಹಾಗೂ ಪ್ರಶಾಂತ್‌ ಭೂಷಣ್‌ ಮೆತ್ತಗಾಗಿದ್ದಾರೆ. ಈ ನಡುವೆ ಇಬ್ಬರೂ ಭಿನ್ನಮತೀಯ ನಾಯಕರು...

ಅರವಿಂದ್ ಕೇಜ್ರಿವಾಲ್‌ ಆಪ್‌ ನ ಭರವಸೆಯ ಪ್ರತೀಕ: ಯೋಗೇಂದ್ರ ಯಾದವ್‌

ಆಮ್‌ ಆದ್ಮಿ ಪಕ್ಷದ ನಾಯಕರೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಅದಕ್ಕೆ ತೇಪೆ ಹಾಕುವ ಪ್ರಯತ್ನಗಳೂ ನಡೆಯುತ್ತಿವೆ. ಈ ನಡುವೆ ಭಿನ್ನಮತೀಯ ನಾಯಕ ಯೋಗೇಂದ್ರ ಯಾದವ್‌ ಅವರು ಅರವಿಂದ್ ಕೇಜ್ರಿವಾಲ್ ಆಪ್‌ನ ಭರವಸೆಯ ಪ್ರತೀಕವಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಬಗೆಯ ಭಿನ್ನಮತದ ಅಗ್ನಿ...

ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಆಪ್‌ನ ಪಿ.ಎ.ಸಿ.ಯಿಂದ ವಜಾ

'ಆಮ್ ಆದ್ಮಿ ಪಕ್ಷ'ದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಆಪ್ ಮುಖಂಡ ಯೋಗೇಂದ್ರ ಯಾದವ್ ಗೆ ಅರ್ಧಚಂದ್ರ ಮಾಡಲಾಗಿದೆ. ಮಾ.4ರಂದು ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಯೋಗೇಂದ್ರ ಯಾದವ್ ರನ್ನು ಕೈಬಿಡುವ ನಿರ್ಣಯ ಕೈಗೊಳ್ಳಲಾಗಿದೆ....

ಆಪ್‌ ನಲ್ಲಿ ಭಿನ್ನಮತ : ಭೂಷಣ್‌, ಯಾದವ್‌ ತಲೆದಂಡ ಸಾಧ್ಯತೆ

ಆಂತರಿಕ ಸಂಘರ್ಷದಿಂದ ತತ್ತರಿಸುತ್ತಿರುವ ಆಮ್‌ ಆದ್ಮಿ ಪಕ್ಷ ಭಿನ್ನಮತೀಯ ನಾಯಕರಾದ ಪ್ರಶಾಂತ ಭೂಷಣ ಮತ್ತು ಯೋಗೇಂದ್ರ ಯಾದವ್‌ ಅವರನ್ನು ಬುಧವಾರ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾ ಮಾಡುವ ಸಾಧ್ಯತೆ ಇದೆ. ಯಾದವ್‌ ಮತ್ತು ಭೂಷಣ್‌ ಆಪ್‌ ಸಂಚಾಲಕ ಹುದ್ದೆಯಿಂದ ದೆಹಲಿ ಮುಖ್ಯಮಂತ್ರಿ...

ಆಪ್ ನಲ್ಲಿ ಒಳಜಗಳದಿಂದ ತುಂಬಾ ನೋವಾಗಿದೆ: ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ಕುರಿತು ಮೌನ ಮುರಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷದಲ್ಲಿನ ಬೆಳವಣಿಗೆಗಳಿಂದ ತೀವ್ರ ದು:ಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, "ಪಕ್ಷದಲ್ಲಿನ ಬೆಳವಣಿಗೆಗಳನ್ನು ಕಂಡು ನನಗೆ ಆಘಾತವಾಗಿವೆ...

ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ: ಎಲ್‌.ರಾಮದಾಸ್‌

ಆಮ್‌ ಆದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್‌ ಅವರನ್ನು ವಜಾಮಾಡಬೇಕು ಎಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ, ಪಕ್ಷದ ಆಂತರಿಕ ಲೋಕಪಾಲ ಅಡ್ಮಿರಲ್‌ ಎಲ್‌.ರಾಮದಾಸ್‌ ಅವರು ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಪತ್ರ ಬರೆದಿದ್ದಾರೆ. ಪಕ್ಷದ ಮುಖಂಡರಿಗೆ ಇ-ಮೇಲ್‌ ಮೂಲಕ...

ಆಪ್ ನ ಆಂತರಿಕ ಭಿನ್ನಮತದ ಬಗೆಗಿನ ವರದಿಗಳು ಹಾಸ್ಯಾಸ್ಪದ: ಯೋಗೇಂದ್ರ ಯಾದವ್

'ಆಮ್ ಆದ್ಮಿ ಪಕ್ಷ'ದಲ್ಲಿ ಭಿನ್ನಮತ ಇರುವ ವರದಿಗಳನ್ನು ಪಕ್ಷದ ಮುಖಂಡ ಯೋಗೇಂದ್ರ ಯಾದವ್ ತಳ್ಳಿಹಾಕಿದ್ದಾರೆ. ಆಪ್ ನಲ್ಲಿ ಆಂತರಿಕ ಭಿನ್ನಮತ ಇರುವುದರ ಬಗೆಗಿನ ಪತ್ರಿಕಾ ವರದಿಗಳು ಹಾಸ್ಯಾಸ್ಪದ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ. ಕಳೆದ 2 ದಿನಗಳಿಂದ ಪತ್ರಿಕೆಗಳು ನನ್ನ ಹಾಗೂ...

ಬಿಜೆಪಿಗೆ ಧೈರ್ಯವಿದ್ದರೆ ದೆಹಲಿ ಚುನಾವಣೆ ಎದುರಿಸಲಿ:ಅರವಿಂದ್ ಕೇಜ್ರಿವಾಲ್

ಮಹಾರಾಷ್ಟ್ರ, ಹರ್ಯಾಣದ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತ ಬೆನ್ನಲ್ಲೇ ದೆಹಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸುವಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸವಾಲು ಹಾಕಿದ್ದಾರೆ. ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿಗೆ ದೆಹಲಿ ಚುನಾವಣೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited